ಸಿಂಪಲ್ ಸುನಿ ನಿರ್ದೇಶನ ಹಾಗು ಟಿ.ಅರ್.ಚಂದ್ರಶೇಖರ್ ಅವರ ನಿರ್ಮಾಣದಲ್ಲಿ, ೨೦೧೭ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ, ಚಮಕ್. ಗಣೇಶ್ ಹಾಗು ರಶ್ಮಿಕಾ ಮಂದಣ್ಣ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಮೊದಲನೆ ಕಿರುನೋಟವನ್ನು ೧೮ ಮೇ ೨೦೧೭ರಂದು ಬಿಡುಗಡೆ ಮಾಡಲಾಯಿತು. ಸಂತೋಷ್ ರೈ ಪತಾಜೆ ಛಾಯಾಗ್ರಹಣದಲ್ಲಿ ಮೂಡಿಬಂದ ಈ ಚಿತ್ರದ ಸಂಗೀತ ನಿರ್ದೇಶನವನ್ನು ಜುಡಾಹ್ ಸ್ಯಾಂಡಿಯವರು ನಿರ್ವಹಿಸಿದ್ದಾರೆ.ಈ ಚಿತ್ರವು ಸುನಿ ಹಾಗು ಗಣೇಶ್ ಜೋಡಿಯ ಮೊತ್ತಮೊದಲನೆ ಚಿತ್ರವಾಗಿದೆ. ಚಿತ್ರದ ಚಿತ್ರೀಕರಣವು ೧೪ ಏಪ್ರಿಲ್ ೨೦೧೭ ರಂದು ಬೆಂಗಳೂರಿನಲ್ಲಿ ಆರಂಭವಾಯಿತು. ಚಿತ್ರದ ಪ್ರಚಾರ ಕಾರ್ಯದ ಅಂಗವಾಗಿ ಚಿತ್ರತಂಡವು ೨೪ ಹಾಗು ೨೭ ಮೇ ತಿಂಗಳ ನಡುವೆ, ಚಿತ್ರದ ಹೋಳಿ ಹಾಡಿನ ಚಿತ್ರಿಕರಣದಲ್ಲಿ ಪಾಲ್ಗೊಳ್ಳಲು ಯುವಜನರಿಗೆ ಮುಕ್ತ ಅಹ್ವಾನ ನೀಡಿತ್ತು. ಚಿತ್ರದ ಕೆಲವು ಹಾಡುಗಳನ್ನು ಐರ್ಲೆಂಡಿನಲ್ಲಿ ಚಿತ್ರೀಕರಿಸಲಾಗಿದೆ. == ಕಥೆಯ ಸಾರಾಂಶ == ಸ್ತ್ರೀರೋಗ ತಜ್ಞನಾದ ಖುಷ್(ಗಣೇಶ್) ಹಾಗೂ ಕಾರ್ಯಕ್ರಮಗಳನ್ನು ಸಂಯೋಜಿಸುವ ಕೆಲಸವುಳ್ಳ ಖುಷಿ(ರಶ್ಮಿಕಾ)ಯ ಮದುವೆ ಹಾಗು ಸಂಸಾರದ ಕಥೆ. == ತಾರಾಗಣ == ಗಣೇಶ್ ರಶ್ಮಿಕಾ ಮಂದಣ್ಣ ಸಾಧು ಕೋಕಿಲ ರಘುರಾಮ್. ಡಿ.ಪಿ. ಸುಮಿತ್ರ == ಹಾಡುಗಳು == ಜುಡಾಹ್ ಸ್ಯಾಂಡಿಯವರು ಈ ಚಿತ್ರಕ್ಕಾಗಿ ೫ ಹಾಡುಗಳನ್ನು ರಚಿಸಿದ್ದಾರೆ. == ಪ್ರತಿಕ್ರಿಯೆ == ವಿಮರ್ಶಕರು ಹಾಗು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಗಳಿಸಿದ ಚಿತ್ರವು, ಕೆಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಸಹ ಆಚರಿಸಿತು. ಓಟ್ಟು ತನ್ನ ಕಾಲಮಾನದಲ್ಲಿ, ಸುಮಾರು ೩೦ ಕೋಟಿಯಷ್ಟು ಸಂಪಾದನೆ ಮಾಡಿದ ಚಮಕ್ ಚಿತ್ರವು "ಬ್ಲಾಕ್ ಬಸ್ಟರ್" ಏಂಬ ಹೆಗ್ಗಳಿಕೆಗೆ ಪಾತ್ರವಾಯಿತು. == ಬಾಹ್ಯ ಕೊಂಡಿಗಳು ==